LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಹಿಬ್ಬಂದಿಯಿಂದ ಟಿಪ್ಪರ್ ಡಿಕ್ಕಿ : ಇಬ್ಬರು ಬೈಕ್ ಸವಾರರ ಸಾವು

ಬೆಳಗಾವಿ : ಟಿಪ್ಪರಗೆ ಬೈಕ್‌ ಡಿಕ್ಕಿ ಹೊಡೆದು ಒಂದೇ ಕುಟುಂಬದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಖಾನಾಪುರ ಪಟ್ಟಣದ ಹೊರವಲಯದಲ್ಲಿ ನಡೆದಿದೆ.



ಖಾನಾಪುರ ತಾಲೂಕಿನ ಹಿಡಲಗಿ ಗ್ರಾಮದ ಪ್ರವೀಣ ಕೋಲಕಾರ (27) ಮತ್ತು ಐಶ್ವರ್ಯ ನರಸನ್ನವರ(20) ಮೃತರು. ಪಾರಿಶ್ವಾಡ ಗ್ರಾಮದ ಸಂತೋಷ ಪಾಟೀಲ ಗಾಯಗೊಂಡಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.



ಪ್ರವೀಣ, ಐಶ್ವರ್ಯಾ ಹಾಗೂ ಸಂತೋಷ ಅವರು ಬೈಕ್ ನಲ್ಲಿ ನಂದಗಡದಿಂದ ಖಾನಾಪುರಕ್ಕೆ ಬರುತ್ತಿದ್ದ ವೇಳೆ ಟಿಪ್ಪರ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇವರೆಲ್ಲರೂ ಒಂದೇ ಕುಟುಂಬದ ಸದಸ್ಯರು. ಟಿಪ್ಪರ್ ಗುದ್ದಿದ ಹೊಡೆತಕ್ಕೆ ಬೈಕ್ ರಸ್ತೆಗೆ ಉರುಳಿ ಬಿದ್ದಿದೆ. ಇಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರೆ ಮತ್ತೊಬ್ಬರು ಗಾಯಗೊಂಡರು.



ಮೃತದೇಹಗಳನ್ನು ಖಾನಾಪುರ ತಾಲೂಕಾಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹವಳದ ದಿಬ್ಬಗಳ ನಡುವೆ ರಾಹುಲ್ ಸಾಹಸರೂಪಾಯಿ 100 ತಲುಪಿದರೂ ಆತಂಕ ಬೇಡ ಎಂದ ಮೋದಿಯ ಆರ್ಥಿಕ ಸಲಹೆಗಾರ್ತಿ : ವ್ಯಾಪಕ ಟೀಕೆಅಮೂಲ್ಯ ಪರಿಸರ ಸಂಪತ್ತಿಗೆ ಬೆದರಿಕೆ ಒಡ್ಡಿದ ಯೋಜನೆ ಗ್ರೇಟ್ ನಿಕೋಬಾರ್ ಯೋಜನೆಭಿನ್ನಾಭಿಪ್ರಾಯ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದ ಸಿಎಂಖಾತೆ ಹಂಚಿಕೆ ಕಿಡಿ: ಮುನಿಯಪ್ಪ ಅಸಮಾಧಾನ, ಖಾತೆ ವಹಿಸಿಕೊಳ್ಳಲು ನಿರಾಕರಣೆಗುಂಡಿನ ದಾಳಿಗೆ ನಲುಗಿದ ಮಣಿಪುರ : ಮೂವರು ನಾಗರಿಕರ ಹತ್ಯೆ, 7 ಮನೆಗಳಿಗೆ ಬೆಂಕಿ ರೆಪೊ ದರದಲ್ಲಿ ಬದಲಾವಣೆ ಇಲ್ಲಖಾತೆ ಹಂಚಿಕೆ ಬಗ್ಗೆ ಅಸಮಾಧಾನ; ಸಚಿವ ಸ್ಥಾನ ತೊರೆದ ರಾಮಲಿಂಗಾ ರೆಡ್ಡಿಖಾತೆಗಳ ಹಂಚಿಕೆ ಕಸರತ್ತು ಪೂರ್ಣ, ಯಾರಿಗೆ ಯಾವ ಖಾತೆ? ಜೀವ ಉಳಿಸಿದ ಮಾನವೀಯತೆ : ದಿಲ್ಲಿ ಅಗ್ನಿ ದುರಂತದಲ್ಲಿ ಮುಸ್ಲಿಂ ಯುವಕರ ಸಾಹಸಕ್ಕೆ ವ್ಯಾಪಕ ಮೆಚ್ಚುಗೆ