ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿಯಲ್ಲಿ ರೈಲಿನ ಎರಡು ಬೋಗಿಗಳು ಪಲ್ಟಿ

ಬೆಳಗಾವಿ: ಮೀರಜಗೆ ತೆರಳುತ್ತಿದ್ದ ಗೂಡ್ಸ ರೈಲಿನ ಎರಡು ಬೋಗಿಗಳು ಪಲ್ಟಿಯಾಗಿರುವ ಘಟನೆ ಬೆಳಗಾವಿ ಮಿಲಿಟರಿ ಮಹಾದೇವ ದೇವಸ್ಥಾನದ ಬಳಿ ಮಂಗಳವಾರ ನಡೆದಿದೆ.

ಜಿಂದಾಲ್‌ ಫ್ಯಾಕ್ಟರಿಯ ಕಬ್ಬಿಣದ ಅದಿರು ತುಂಬಿಕೊಂಡು ಮಿರಜಗೆ ಹೊರಟಿದ್ದ ಗೂಡ್ಸ್ ರೈಲು ಹಳಿ ತಪ್ಪಿದ್ದರಿಂದ ರೈಲು ಸಂಚಾರದಲ್ಲಿ ಅಡಚಣೆ ಉಂಟಾಗಿದೆ. ಸುಮಾರು 3 ರಿಂದ 4 ಗಂಟೆ ವರೆಗೆ ದುರಸ್ತಿ ಕಾರ್ಯ ನಡೆಯಲಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಬೆಳಗಾವಿ-ಮಿರಜ ಮಾರ್ಗದಲ್ಲಿ ಎಲ್ಲಾ ರೈಲುಗಳು ಸಂಚಾರ ಸ್ಥಗಿತಗೊಂಡಿದೆ. ಹಳಿಯ ದುರಸ್ತಿ ಕಾರ್ಯ ಮುಗಿದ ಬಳಿಕವೇ ರೈಲು ಆರಂಭಗೊಳ್ಳಲಿವೆ.

ಈಗಾಗಲೇ ಮೀರಜನಿಂದ ಬರುತ್ತಿದ್ದ ಚಾಲುಕ್ಯ ಶರಾವತಿ ಎಕ್ಸಪ್ರೆಸ್, ಎಲ್ ಟಿಟಿ ದಾದರ, ಅಜ್ಮೀರ ಎಕ್ಸಪ್ರೆಸ್‌ ಮಾರ್ಗ ಮಧ್ಯದಲ್ಲಿಯೇ ನಿಂತುಕೊಂಡಿವೆ. ಬೆಳಗಾವಿಯಿಂದ ಹೊರಟಿದ್ದ ರಾಣಿ ಚನ್ನಮ್ಮ ಎಕ್ಸಪ್ರೆಸ್, ಬೆಂಗಳೂರು ಜೋಧಪುರ ಎಕ್ಸಪ್ರೆಸ್, ಬೆಂಗಳೂರಿಂದ ಭಗತ ಕೋಟಿ, ಕ್ಯಾಸಲರಾಕ್- ಮಿರಜ ಪ್ಯಾಸೆಂಜರ, ಹರಿಪ್ರಿಯಾ ಎಕ್ಸಪ್ರೆಸ್ ರೈಲುಗಳ ಸಂಚಾರದಲ್ಲೂ ವ್ಯತ್ಯಯವಾಗಿದೆ. ಇದರಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.