LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ನಾಳೆಯಿಂದ ಕೃಷ್ಣಾ ಕಾಲುವೆಗಳಿಗೆ ನೀರು; ಅಚ್ಚುಕಟ್ಟು ರೈತರಿಗೆ ಸರ್ಕಾರದ ಸಿಹಿ ಸುದ್ದಿ

Advertisement

ಬೆಂಗಳೂರು, ಜುಲೈ 27: ಕೃಷ್ಣಾ ಮೇಲ್ದಂಡೆ ಯೋಜನೆ (ಕೃಷ್ಣಾ ಭಾಗ್ಯ ಜಲ ನಿಗಮ) ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಬಿತ್ತನೆ ಹಾಗೂ ಬೆಳೆಗಳ ರಕ್ಷಣೆಗೆ ನೆರವಾಗುವ ಉದ್ದೇಶದಿಂದ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಂದ ಜುಲೈ 28ರಿಂದ ಕಾಲುವೆಗಳಿಗೆ ಅಧಿಕೃತವಾಗಿ ನೀರು ಹರಿಸಲು ಸರ್ಕಾರ ನಿರ್ಧರಿಸಿದೆ.

ಜಲಸಂಪನ್ಮೂಲ ಸಚಿವ ರಾಮಲಿಂಗ ರೆಡ್ಡಿ ಅವರ ನಿರ್ದೇಶನದಂತೆ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಜಲಾಶಯಗಳಿಗೆ ಸಮರ್ಪಕ ಒಳಹರಿವು ಮುಂದುವರಿಯುವವರೆಗೆ ಕಾಲುವೆಗಳ ಜಾಲಕ್ಕೆ ನಿರಂತರವಾಗಿ ನೀರು ಪೂರೈಸಲಾಗುತ್ತದೆ ಎಂದು ಕೃಷ್ಣಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಜಲಸಂಪನ್ಮೂಲ ಇಲಾಖೆಯ ಅಂದಾಜಿನ ಪ್ರಕಾರ, 2026–27ನೇ ಸಾಲಿನ ಮುಂಗಾರು ಹಂಗಾಮಿನ ನೀರಾವರಿಗೆ 65 ಟಿ.ಎಂ.ಸಿ. ಹಾಗೂ 2027ರ ಜೂನ್ ಅಂತ್ಯದವರೆಗೆ ಕುಡಿಯುವ ನೀರು ಮತ್ತು ಇತರ ಅಗತ್ಯಗಳಿಗೆ 58 ಟಿ.ಎಂ.ಸಿ. ಸೇರಿ ಒಟ್ಟು 124 ಟಿ.ಎಂ.ಸಿ. ನೀರಿನ ಅಗತ್ಯವಿದೆ.

ಆಲಮಟ್ಟಿ ಜಲಾಶಯಕ್ಕೆ ಜುಲೈ 6ರಿಂದಲೇ ಒಳಹರಿವು ಆರಂಭವಾಗಿದ್ದು, ಒಳಹರಿವು ಸಮರ್ಪಕವಾಗಿರುವವರೆಗೆ ನಿರಂತರವಾಗಿ ನೀರು ಹರಿಸಲಾಗುವುದು. ಒಂದು ವೇಳೆ ಜಲಾಶಯಕ್ಕೆ ಬರುವ ನೀರಿನ ಪ್ರಮಾಣ ಕಡಿಮೆಯಾದರೆ, ಲಭ್ಯವಿರುವ ನೀರನ್ನು ಸಮರ್ಪಕವಾಗಿ ಹಂಚಿಕೆ ಮಾಡಲು ಹಿಂದೆ ಅನುಸರಿಸಲಾಗುತ್ತಿದ್ದ '14 ದಿನ ಚಾಲು–10 ದಿನ ಬಂದ್' ಪದ್ಧತಿಯನ್ನು ಜಾರಿಗೆ ತರಲಾಗುವುದು ಎಂದು ಇಲಾಖೆ ತಿಳಿಸಿದೆ.

ಮುಂಬರುವ ನವೆಂಬರ್‌ನಲ್ಲಿ ಜಲಾಶಯಗಳಲ್ಲಿನ ನೀರಿನ ಸಂಗ್ರಹವನ್ನು ಪರಿಶೀಲಿಸಿ, ಹಿಂಗಾರು ಹಂಗಾಮಿಗೆ ನೀರು ಹರಿಸುವ ಕುರಿತು ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಚ್ಚುಕಟ್ಟು ಪ್ರದೇಶದ ರೈತರು ಹೆಚ್ಚು ನೀರು ಅಗತ್ಯವಿರುವ ಬೆಳೆಗಳ ಬದಲಾಗಿ ಕಡಿಮೆ ನೀರು ಬೇಡುವ ಬೆಳೆಗಳನ್ನು ಬೆಳೆಯಬೇಕು. ನೀರನ್ನು ಪೋಲು ಮಾಡದೆ ಮಿತವಾಗಿ ಬಳಸುವುದರೊಂದಿಗೆ ನೀರಾವರಿ ನಿರ್ವಹಣೆಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುವಂತೆ ಇಲಾಖೆಯು ರೈತರಿಗೆ ಮನವಿ ಮಾಡಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಂಗಾಳಕೊಲ್ಲಿಯ ಮೇಲೆ ಸಾವಿರ ಕಿ.ಮೀ. ವ್ಯಾಪಿಸಿದ ಮಳೆಮೋಡಗಳ ಕವಚ; ಮುಂಗಾರಿನ ಅಬ್ಬರ ಸೆರೆಹಿಡಿದ ಉಪಗ್ರಹಎಫ್‌ಐಆರ್‌ ಹಿಂಪಡೆಯದಿದ್ದರೆ ಮತ್ತೆ ಬೀದಿಗಿಳಿಯುವ ಎಚ್ಚರಿಕೆಇ–20 ವಿರುದ್ಧ ರಾಷ್ಟ್ರವ್ಯಾಪಿ ಹೋರಾಟಕ್ಕೆ ಎಎಪಿ ಸಜ್ಜು; ಆಗಸ್ಟ್‌ 1ರಂದು ರಾಷ್ಟ್ರೀಯ ಸಮಾವೇಶಬಿಜೆಪಿಗರ ಎದೆ ಸೀಳಿದರೆ ನಾಲ್ಕಕ್ಷರ ಸಿಗುವುದಿಲ್ಲ: ಪ್ರಿಯಾಂಕ್ ಖರ್ಗೆ ತಿರುಗೇಟು‘ಗೋವನ್ನು ರಾಷ್ಟ್ರಮಾತೆ’ ಎಂದು ಘೋಷಿಸಲು ಆಗ್ರಹ: 1.80 ಲಕ್ಷ ಸಹಿಗಳ ಮನವಿ ಸಲ್ಲಿಕೆಅನ್ನಭಾಗ್ಯ ಅಕ್ಕಿ ಕಾಳಸಂತೆಗೆ ಸರ್ಕಾರ ಕಠಿಣ ಕ್ರಮ: ಬೆಳಗಾವಿಯಲ್ಲಿ 32 ಮಂದಿ ಆರೋಪಿಗಳ ಪಟ್ಟಿಭರ್ತಿಗೆ ನಾಲ್ಕು ಅಡಿ ಬಾಕಿ: ರಕ್ಕಸಕೊಪ್ಪ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಫುಟ್‌ಬೋರ್ಡ್‌ನಲ್ಲಿ ವಿದ್ಯಾರ್ಥಿನಿಯರ ಅಪಾಯಕಾರಿ ಪ್ರಯಾಣಇ–20 ವಿರುದ್ಧ ರಾಷ್ಟ್ರವ್ಯಾಪಿ ಹೋರಾಟಕ್ಕೆ ಎಎಪಿ ಸಜ್ಜು; ಆಗಸ್ಟ್‌ 1ರಂದು ರಾಷ್ಟ್ರೀಯ ಸಮಾವೇಶನಾಳೆಯಿಂದ ಕೃಷ್ಣಾ ಕಾಲುವೆಗಳಿಗೆ ನೀರು; ಅಚ್ಚುಕಟ್ಟು ರೈತರಿಗೆ ಸರ್ಕಾರದ ಸಿಹಿ ಸುದ್ದಿ