ಕಿತ್ತೂರು, 18 : ಕಂಠಪೂರ್ತಿ ಕುಡಿದಿದ್ದವರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು 32 ವರ್ಷದ ರೌಡಿ ಶೀಟರನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.
ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ಹತ್ಯೆಯಾದ ರೌಡಿ ಶೀಟರನನ್ನು ರಾಮಚಂದ್ರ ಆರೇರ ಎಂದು ಗುರುತಿಸಲಾಗಿದೆ. ಹತ್ಯೆಯಾದ ರಾಮಚಂದ್ರ ಹಾಗೂ ಹತ್ಯೆ ಮಾಡಿದ ಕಲ್ಲಪ್ಪ ಕ್ಯಾತನವರ (48) ಇಬ್ಬರೂ ಸೇರಿಕೊಂಡು ರಾತ್ರಿಯಿಡಿ ಸರಾಯಿ ಕುಡಿದಿದ್ದಾರೆ. ಇವರ ಜೊತೆಗೆ ಇದ್ದ ವಿಜಯ ಆರೇರ ನಶೆಯಲ್ಲಿ ತಲ್ವಾರ್ ತೆಗೆದು ಹಲ್ಲೆ ಮಾಡಿದ್ದಾನೆ. ಆಗ ಕಲ್ಲಪ್ಪ ಮತ್ತು ಭರತ ಹಿತ್ತಲಕೇರಿ ಸೇರಿ ವಿಜಯನ ಮೇಲೆ ಕುಡುಗೋಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಕಲ್ಲಪ್ಪ ಕ್ಯಾತನವರಗೆ ಕಿವಿ ಮತ್ತು ಹಿಂಭಾಗ ಗಾಯವಾಗಿದ್ದು ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವಿಜಯನ ಎರಡು ಕೈಗಳಿಗೆ ಹೆಚ್ಚಿನ ಗಾಯಗಳಾಗಿದ್ದು ಅಧಿಕ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ. ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.