ಗಾಂಧಿನಗರ, ೨೬- ಪ್ಯಾರಾಗ್ಲೈಡಿಂಗ ವೇಳೆ ಮೇಲಿನಿಂದ ಬಿದ್ದು 50 ವರ್ಷದ ದಕ್ಷಿಣ ಕೋರಿಯಾದ ಪ್ರವಾಸಿಗರೊಬ್ಬರು ಸಾವಿಗೀಡಾದ ದುರಂತ ಗುಜರಾತ್ನ ಮೆಹ್ಸಾನಾ ಜಿಲ್ಲೆಯ ಕಡಿ ಬಳಿ ನಡೆದಿದೆ.
ಶಿನ್ ಬೈಯೋನ್ ಮೂನ್ ಎಂಬ ದಕ್ಷಿಣ ಕೋರಿಯಾದ ವ್ಯಕ್ತಿ ಪ್ಯಾರಾಗ್ಲೈಡಿಂಗ್ ಸಮಯದಲ್ಲಿ ಮೇಲಾವರಣ ಸರಿಯಾಗಿ ತೆರೆಯದ ಕಾರಣ 50 ಅಡಿ ಎತ್ತರದಿಂದ ಬಿದ್ದು ಸಾವನ್ನಪ್ಪಿದ್ದಾರೆ.
ಅರೆಪ್ರಜ್ಞಾವಸ್ಥೆಯಲ್ಲಿದ್ದ ಆವರನ್ನು ಸ್ನೇಹಿತರು ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ.
ಶಿನ್ ಬೈಯೋನ್ ಮೂನ್ ವಡೋದರಾ ಪ್ರವಾಸದಲ್ಲಿದ್ದ ವೇಳೆ ಅವರ ಕೋರಿಯಾದ ಸ್ನೇಹಿತನ ಜೊತೆ ಶನಿವಾರ ಸಂಜೆ ಕಾಡಿ ಪಟ್ಟಣದ ಬಳಿಯ ವಿಸತಪುರ ಗ್ರಾಮದಲ್ಲಿ ಪ್ಯಾರಾಗ್ಲೈಡಿಂಗ್ ಗೆ ತೆರಳಿದ್ದರು.
ಅಪಘಾತದಿಂದ ಸಾವಿಗೀಡಾದ ಪ್ರಕರಣವನ್ನು ಕಡಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದು ವಡೋದರಾ ಮತ್ತು ಕೋರಿಯಾ ರಾಯಭಾರ ಕಚೇರಿಯಲ್ಲಿನ ಸಂತ್ರಸ್ತೆಯ ಸಂಬಂಧಿಕರು ಮತ್ತು ಸ್ನೇಹಿತರಿಗೆ ಘಟನೆಯ ಬಗ್ಗೆ ತಿಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.