ಹೊಸದಿಲ್ಲಿ: ಆರ್ಥಿಕವಾಗಿ ಹಿಂದುಳಿದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಶೇ.10 ಮೀಸಲಾತಿಯನ್ನು ಎತ್ತಿ ಹಿಡಿಯುವ ಮೂಲಕ ಸುಪ್ರೀಮ ಕೋರ್ಟ ಮಹತ್ವದ ಆದೇಶ ಹೊರಡಿಸಿದೆ.
ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕಲ್ಪಿಸಲಾಗಿರುವ ಶೇ.10 ಮೀಸಲಾತಿಯ ಸಿಂಧುತ್ವವನ್ನು ಪ್ರಶ್ನಿಸಿದ ಅರ್ಜಿ ಕುರಿತು ತೀರ್ಪು ಸುಪ್ರೀಮ ಕೋರ್ಟ ಪ್ರಕಟಿಸಿದೆ.
ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಪ್ರಕರಣದ ವಿಚಾರಣೆ ನನಡೆಸಿತು. ಇಡಬ್ಲ್ಯೂಎಸ್ ಕೋಟಾದ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಸುದೀರ್ಘ ವಿಚಾರಣೆಯ ನಂತರ ಸುಪ್ರೀಮ ಕೋರ್ಟ ಸೆಪ್ಟೆಂಬರ್ 27 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಇಡಬ್ಲ್ಯೂಎಸ್ ಕೋಟಾವು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುತ್ತದೆಯೇ ಎಂಬುದರ ಅಂತಿಮ ತೀರ್ಪು ನೀಡಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಸಂವಿಧಾನದ 103 ನೇ ತಿದ್ದುಪಡಿ ಕಾಯ್ದೆ 2019 ರ ಸಿಂಧುತ್ವವನ್ನು ಎತ್ತಿ ಹಿಡಿಯುತ್ತದೆ ಅಂತ ತಿಳಿಸಿದೆ.
ಈ ನಡುವೆ ಐವರ ಸಾಂವಿಧಾನಿಕ ಪೀಠದ ಪೈಕಿ ನಾಲ್ವರು ನ್ಯಾಯಾಧೀಶರು ಕಾಯ್ದೆಯನ್ನು ಎತ್ತಿಹಿಡಿಯುತ್ತಾರೆ ಮತ್ತು ಒಬ್ಬ ನ್ಯಾಯಾಧೀಶರು ಭಿನ್ನಮತೀಯ ತೀರ್ಪನ್ನು ನೀಡಿದ್ದಾರೆ.