ಕೋಟಾ: ರಾಜಸ್ಥಾನದ ಕೋಟಾದಲ್ಲಿ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಭಯಾನಕ ಘಟನೆ ನಡೆದಿದೆ. ಆತ್ಮಹತ್ಯೆಯ ಹಾದಿ ತುಳಿದವರು 16, 17 ಮತ್ತು 18 ವರ್ಷ ವಯಸ್ಸಿನವರಾಗಿದ್ದಾರೆ.
ಈ ಬಾಲಕರೆಲ್ಲರೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು. ಮೂವರೂ ಸ್ನೇಹಿತರಾಗಿದ್ದು, ಪಕ್ಕದ ಕೊಠಡಿಗಳಲ್ಲಿ ಒಂದೇ ಹಾಸ್ಟೆಲ್ನಲ್ಲಿ ವಾಸವಿದ್ದರು.
ಅಂಕುಶ ಮತ್ತು ಉಜ್ವಲ್ ಬಿಹಾರ ಮೂಲದವರಾಗಿದ್ದು, ಪ್ರಣವ ಎಂಬವ ಮಧ್ಯಪ್ರದೇಶದವನು. ಅಂಕುಶ ಎಂಜಿನಿಯರಿಂಗ್ ಕಾಲೇಜು ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ಉಜ್ವಲ್ ಮತ್ತು ಪ್ರಣವ ಅವರು ವೈದ್ಯಕೀಯ ಪೂರ್ವ ಪ್ರವೇಶ ಪರೀಕ್ಷೆಯಾದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ (ಪದವಿಪೂರ್ವ) ತಯಾರಿ ನಡೆಸುತ್ತಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.