LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ವಿದೇಶ ಪ್ರವಾಸಗಳ ವಿವರ ಬಹಿರಂಗಪಡಿಸಿ: ರಾಹುಲ್‌ಗೆ ಅಮಿತ್ ಶಾ ಸವಾಲು

ಕರ್ನಾಲ್, ನ. 5: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮ ವಿದೇಶಿ ಪ್ರವಾಸಗಳ ಸಂಪೂರ್ಣ ವಿವರಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು. ಅವರು ಎಲ್ಲಿಗೆ ಹೋಗಿದ್ದರು, ಯಾರನ್ನು ಭೇಟಿಯಾಗಿದ್ದರು ಮತ್ತು ಪ್ರವಾಸದ ಉದ್ದೇಶವೇನು ಎಂಬುದನ್ನು ತಿಳಿದುಕೊಳ್ಳುವ ಹಕ್ಕು ದೇಶದ ಜನರಿಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಒತ್ತಾಯಿಸಿದ್ದಾರೆ.

ಗುರುವಾರ ಇಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಇತ್ತೀಚಿನ ವಿಯೆಟ್ನಾಂ ಪ್ರವಾಸವನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು.

‘ರಾಹುಲ್ ಗಾಂಧಿ ಇತ್ತೀಚೆಗೆ ವಿಯೆಟ್ನಾಂನಿಂದ ಹಿಂದಿರುಗಿದ್ದಾರೆ. ಆದರೆ, ತಮ್ಮ ಪ್ರವಾಸದ ಬಗ್ಗೆ ಮಾಹಿತಿ ನೀಡಿಲ್ಲ. ಅಲ್ಲಿ ಎಷ್ಟು ದಿನ ತಂಗಿದ್ದರು, ಯಾರನ್ನು ಭೇಟಿಯಾದರು, ಯಾವ ಉದ್ದೇಶಕ್ಕಾಗಿ ತೆರಳಿದ್ದರು ಮತ್ತು ಅವರ ಕಾರ್ಯಕ್ರಮಗಳೇನಾಗಿದ್ದವು ಎಂಬುದನ್ನು ಜನರಿಗೆ ತಿಳಿಸಬೇಕು’ ಎಂದು ಆಗ್ರಹಿಸಿದರು.

ಲೋಕಸಭೆಯ ವಿರೋಧ ಪಕ್ಷದ ನಾಯಕನಂತಹ ಮಹತ್ವದ ಹುದ್ದೆಯಲ್ಲಿರುವ ವ್ಯಕ್ತಿಯ ವಿದೇಶಿ ಪ್ರವಾಸಗಳ ಕುರಿತು ಪಾರದರ್ಶಕತೆ ಇರಬೇಕು ಎಂದು ಹೇಳಿದರು.

ವಿದ್ಯುನ್ಮಾನ ಮತಯಂತ್ರಗಳ ಕುರಿತು ಕಾಂಗ್ರೆಸ್ ಮಾಡುತ್ತಿರುವ ಆರೋಪಗಳನ್ನೂ ಪ್ರಶ್ನಿಸಿದ ಶಾ, ‘ಮತಯಂತ್ರಗಳು ದೋಷಪೂರಿತವಾಗಿದ್ದರೆ, ಅದೇ ಯಂತ್ರಗಳ ಮೂಲಕ ನಡೆದ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಶಾಸಕರು ಕೇರಳದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ಏಕೆ?’ ಎಂದು ಪ್ರಶ್ನಿಸಿದರು.

ಬಹಿರಂಗ ಚರ್ಚೆ ಆಹ್ವಾನಕ್ಕೆ ತಿರುಗೇಟು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಚರ್ಚೆಗೆ ಬರುವಂತೆ ರಾಹುಲ್ ಗಾಂಧಿ ನೀಡಿರುವ ಆಹ್ವಾನ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಆದರೆ, ಮೋದಿ ಅವರು ಈ ಆಹ್ವಾನವನ್ನು ಸ್ವೀಕರಿಸಿಲ್ಲ. ಬದಲಾಗಿ ಬಿಜೆಪಿ ನಾಯಕರು ರಾಹುಲ್ ಗಾಂಧಿ ಅವರಿಗೆ ಪ್ರತಿ ಸವಾಲು ಹಾಕಲು ಮುಂದಾಗಿದ್ದಾರೆ. ಇದೀಗ ಅಮಿತ್ ಶಾ ಕೂಡ ಮೋದಿಯವರ ಬದಲಿಗೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರೊಂದಿಗೆ ಚರ್ಚೆ ನಡೆಸುವಂತೆ ರಾಹುಲ್ ಗಾಂಧಿ ಅವರಿಗೆ ಸವಾಲು ಹಾಕಿದ್ದಾರೆ.

‘ಮೋದಿಯವರನ್ನು ಬಿಡಿ. ಹರಿಯಾಣದಲ್ಲಿ ಯಾವುದಾದರೂ ಸ್ಥಳವನ್ನು ಆಯ್ಕೆ ಮಾಡಿ. ನಮ್ಮ ಯುವ ಮೋರ್ಚಾ ಅಧ್ಯಕ್ಷರೇ ನಿಮ್ಮೊಂದಿಗೆ ಚರ್ಚೆಗೆ ಸಿದ್ಧರಿದ್ದಾರೆ’ ಎಂದು ಶಾ ಹೇಳಿದರು.

‘ನಿಜವಾಗಿಯೂ ಅರ್ಥಪೂರ್ಣ ಚರ್ಚೆ ನಡೆಸುವ ಉದ್ದೇಶವಿದ್ದರೆ ಸಂಸತ್ತಿಗೆ ಬಂದು ಚರ್ಚಿಸಿ. ಆದರೆ, ನೀವು ಚರ್ಚೆಯಿಂದ ತಪ್ಪಿಸಿಕೊಳ್ಳುತ್ತೀರಿ’ ಎಂದು ಅಮಿತ್ ಶಾ ಟೀಕಿಸಿದರು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST