LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ಜಿಎಸ್‌ಟಿ ಸಂಗ್ರಹ ಶೇ. 14.8ರಷ್ಟು ಏರಿಕೆ: ಆಗಸ್ಟನಲ್ಲಿ ₹2 ಲಕ್ಷ ಕೋಟಿ ವರಮಾನ

ಹೊಸದಿಲ್ಲಿ, ಸೆ 1 : (ಸಮದರ್ಶಿ ಸುದ್ದಿ) - ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಮೂಲಕ ಆಗಸ್ಟ್‌ನಲ್ಲಿ ₹2 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 14.8ರಷ್ಟು ಹೆಚ್ಚಳವಾಗಿದೆ.

ಕೇಂದ್ರ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, 2025ರ ಆಗಸ್ಟ್‌ನಲ್ಲಿ ₹1.74 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿತ್ತು. ಈ ಬಾರಿ ಅದು ₹2 ಲಕ್ಷ ಕೋಟಿಗೆ ಏರಿಕೆಯಾಗಿದೆ.

2026-27ರ ಹಣಕಾಸು ವರ್ಷದ ಜೂನ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ. 7.8ರಷ್ಟು ಬೆಳವಣಿಗೆ ಕಂಡಿದೆ ಎಂಬ ಅಧಿಕೃತ ಅಂಕಿಅಂಶಗಳು ಬಿಡುಗಡೆಯಾದ ಮರುದಿನವೇ ಆಗಸ್ಟ್ ತಿಂಗಳ ಜಿಎಸ್‌ಟಿ ಸಂಗ್ರಹದ ವಿವರಗಳು ಪ್ರಕಟಗೊಂಡಿವೆ.

ಆಂತರಿಕ ವಹಿವಾಟಿನಿಂದ ₹1.37 ಲಕ್ಷ ಕೋಟಿ

ದೇಶೀಯ ವಹಿವಾಟುಗಳಿಂದ ಸಂಗ್ರಹವಾಗಿರುವ ಜಿಎಸ್‌ಟಿ ವರಮಾನವು ಶೇ. 9.3ರಷ್ಟು ಏರಿಕೆಯಾಗಿದ್ದು, ₹1.37 ಲಕ್ಷ ಕೋಟಿಗೆ ತಲುಪಿದೆ. ಆಮದು ಸರಕುಗಳಿಂದ ₹62,604 ಕೋಟಿ ಜಿಎಸ್‌ಟಿ ಸಂಗ್ರಹವಾಗಿದ್ದು, ಇದು ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಶೇ. 29ರಷ್ಟು ಹೆಚ್ಚಾಗಿದೆ.

ಸುಂಕದ ಅಡೆತಡೆಗಳು ಹಾಗೂ ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಂತಹ ಜಾಗತಿಕ ಸವಾಲುಗಳ ನಡುವೆಯೂ ದೇಶೀಯ ಆರ್ಥಿಕ ಚಟುವಟಿಕೆಗಳು ಮುಂದುವರಿದಿರುವುದನ್ನು ಜಿಎಸ್‌ಟಿ ಸಂಗ್ರಹದ ಏರಿಕೆ ಪ್ರತಿಬಿಂಬಿಸುತ್ತದೆ.

ಮರುಪಾವತಿ ಬಳಿಕ ನಿವ್ವಳ ಜಿಎಸ್‌ಟಿ ₹1.68 ಲಕ್ಷ ಕೋಟಿ

ಜುಲೈನಲ್ಲಿ ಒಟ್ಟು ಜಿಎಸ್‌ಟಿ ಮರುಪಾವತಿಯು ಶೇ. 68ರಷ್ಟು ಏರಿಕೆಯಾಗಿದ್ದು, ₹31,795 ಕೋಟಿಗೆ ತಲುಪಿದೆ. ಮರುಪಾವತಿ ಮೊತ್ತವನ್ನು ಹೊರತುಪಡಿಸಿದ ಬಳಿಕ ಆಗಸ್ಟ್ ತಿಂಗಳ ನಿವ್ವಳ ಜಿಎಸ್‌ಟಿ ಸಂಗ್ರಹವು ₹1.68 ಲಕ್ಷ ಕೋಟಿಯಾಗಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಎಸ್‌ಟಿ ಸಂಗ್ರಹ ಶೇ. 14.8ರಷ್ಟು ಏರಿಕೆ: ಆಗಸ್ಟನಲ್ಲಿ ₹2 ಲಕ್ಷ ಕೋಟಿ ವರಮಾನಬಿಜೆಪಿ–ಜೆಡಿಎಸ್‌ನ ನೋಬಾಲ್, ಫುಲ್‌ಟಾಸ್‌ಗೆ ನನ್ನ ವಿಕೆಟ್ ಬೀಳುವುದಿಲ್ಲ: ಪ್ರಿಯಾಂಕ್ ಖರ್ಗೆಡಿಸಿಪಿ ನೇಮಗೌಡ ಮೇಲೆ ಹಲ್ಲೆ ಆರೋಪ: ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ವಿರುದ್ಧ ಜೆಡಿಎಸ್ ವಾಗ್ದಾಳಿಜಿಡಿಪಿ ಅಂಕಿಅಂಶ ತಿರುಚಿ ಆರ್ಥಿಕ ದುಸ್ಥಿತಿ ಮರೆಮಾಚಲಾಗುತ್ತಿದೆ: ಕಾಂಗ್ರೆಸ್‘2028ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ’: ಬಿ.ವೈ. ವಿಜಯೇಂದ್ರ‘ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು: ನೂರ್ ಶ್ರೀಧರ ಆಗ್ರಹ‘ಎಸ್‌ಐಆರ್ ದೇಶವನ್ನು ಹಾಳು ಮಾಡುವ ಸಂಚು’: ನಟ ಪ್ರಕಾಶ ರಾಜ್ದೇಶಾದ್ಯಂತ ನೀಟ್ ಪ್ರತಿಭಟನಾಕಾರರ ವಿರುದ್ಧದ ಎಲ್ಲ ಎಫ್‌ಐಆರ್ ರದ್ದುಗೊಳಿಸಿದ ಸುಪ್ರೀಂ ಕೋರ್ಟದೇಶಾದ್ಯಂತ ಟೀಕೆಗೆ ಗುರಿಯಾದ ಝೀ ಗ್ರೂಪ್ ಮುಖ್ಯಸ್ಥನ ₹22,000 ಕೋಟಿ ಸಾಲ ಮನ್ನಾ ಆದೇಶಕ್ಕೆ ತಡೆಇರಾನ್ ಸಂಘರ್ಷದ ನಡುವೆಯೂ ಭಾರತದ ಜಿಡಿಪಿ ಶೇ 7.8ರ ಬೆಳವಣಿಗೆ: ಪ್ರಧಾನಿ ಮೋದಿ