LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಮುಸ್ಲಿಮರಿಗೆ ಮತದಾನದ ಹಕ್ಕು ಕೊಡಬಾರದು ಎಂದಿದ್ದ ಸ್ವಾಮಿಗೆ ನೋಟೀಸ

ಬೆಂಗಳೂರು : ಮುಸ್ಲಿಮರಿಗೆ ಮತದಾನದ ಹಕ್ಕು ನಿರಾಕರಣೆ ಮಾಡುವ ಕಾನೂನು ತರಬೇಕು ಎಂದು ಹೇಳಿದ್ದ ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮಿ ವಿರುದ್ಧ ಎಫ್​ಐಆರ್​ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ.



ಡಿ.2ರಂದು ಬೆಳಗ್ಗೆ 11ಕ್ಕೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ ಉಪ್ಪಾರಪೇಟೆ ಠಾಣೆ ಪೊಲೀಸರಿಂದ ನೋಟಿಸ್ ಜಾರಿ ಮಾಡಲಾಗಿದೆ. ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಬಿಎನ್​​ಎಸ್ ಸೆಕ್ಷನ್ 299 ರ ಅಡಿಯಲ್ಲಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.



ವಕ್ಫ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಅವರು ದೇಶದ ನಾಗರಿಕರಾದ ಮುಸ್ಲಿಮರಿಗೆ ಮತದಾನದ ಹಕ್ಕು ನಿರಾಕರಿಸಬೇಕು ಎಂದಿದ್ದು ವಿವಾದಕ್ಕೆ ಕಾರಣವಾಗಿತ್ತು.

ನಂತರ ಈ ಹೇಳಿಕೆ ಕುರಿತು ವಿವಾದ ಸ್ವಾಮೀಜಿ ವಿಷಾದಿಸಿದ್ದರು. ಬಾಯಿ ತಪ್ಪಿ ಆಡಿದ ಮಾತಾಗಿದೆ. ಹಾಗೆ ಹೇಳಬಾರದಾಗಿತ್ತು. ಮುಸ್ಲಿಮರು ಭಾರತೀಯರೇ ಹೊರತು ಬೇರೆ ಯಾರೂ ಅಲ್ಲ. ದಯವಿಟ್ಟು ಈ ವಿಚಾರವನ್ನು ಇಲ್ಲಿಗೇ ಬಿಟ್ಟುಬಿಡಿ ಎಂದು ಸ್ವಾಮೀಜಿ ಮನವಿ ಮಾಡಿದ್ದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗರ ಪಂಚಮಿ ದಿನವೇ ಹಾವು ಕಡಿತಕ್ಕೆ ಮಹಿಳೆ ಬಲಿಕಾಡುಹಂದಿಗಳ ದಾಳಿಗೆ ಕಬ್ಬು ಬೆಳೆ ನಾಶಗದ್ದಲದ ನಡುವೆಯೇ ಮುಕ್ತಾಯ ಕಂಡ ಸಂಸತ್ ಅಧಿವೇಶನ: ಚರ್ಚೆಯಿಲ್ಲದೆ 11 ಮಸೂದೆಗಳ ಅಂಗೀಕಾರ300 ಅಡಿ ಕುಸಿದ ವಿಮಾನ, ಪೈಲಟ್ ಗಾಂಜಾ ಸೇವನೆ ಪತ್ತೆ!ಮಾನವ ಹಕ್ಕುಗಳ ಪಾಠ ನಿಲ್ಲಿಸಿ; ಫ್ರಾನ್ಸ್ ವಿರುದ್ಧ ಇರಾನ್ ಕಿಡಿ25 ಬಿಜೆಪಿ ನಾಯಕರು, ಹಿಂದುತ್ವ ಕಾರ್ಯಕರ್ತರ ವಿರುದ್ಧದ ಪ್ರಕರಣ ಹಿಂಪಡೆಯಲು ನ್ಯಾಯಾಲಯದ ಅನುಮತಿ!ದೇಶಕ್ಕೇ ಮಾದರಿಯಾಗುವಂತೆ ಗಣೇಶೋತ್ಸವ ಆಚರಿಸೋಣಪರಪ್ಪನ ಅಗ್ರಹಾರದಲ್ಲಿ ಪ್ರಜ್ವಲ್‌ ರೇವಣ್ಣ ಬಳಿ ಮೊಬೈಲ್‌, ಪೆನ್‌ಡ್ರೈವನಲ್ಲಿ ಅಶ್ಲೀಲ ವಿಡಿಯೋ ಪತ್ತೆ ; ವಿಐಪಿ ಸೆಲ್‌ನಿಂದ ಸಾಮಾನ್ಯ ಬ್ಯಾರಕ್‌ಗೆ ಸ್ಥಳಾಂತರಲಡಾಖ್‌ನ ಲೇಹ್‌ನಲ್ಲಿ 5.5 ತೀವ್ರತೆಯ ಭೂಕಂಪದೇಶಭಕ್ತಿಯ ಸರ್ಟಿಫಿಕೇಟ್ ನೀಡುವ ಮುನ್ನ ಆರ್‌ಎಸ್‌ಎಸ್‌ ತ್ರಿವರ್ಣ ಧ್ವಜದ ಇತಿಹಾಸ ಹೇಳಲಿ: ಪ್ರಿಯಾಂಕ್ ಖರ್ಗೆ