ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹಿರಿಯ ಪತ್ರಕರ್ತ ಎಂ ಎನ್ ಪಾಟೀಲ ನಿಧನ

ಬೆಳಗಾವಿ 27: ಬೆಳಗಾವಿಯ ಹಿರಿಯಪತ್ರಕರ್ತರಾದ ಎಂ. ಎನ್. ಪಾಟೀಲ ಅವರು ನಿನ್ನೆ ರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಪಾಟೀಲ ಅವರು ಯು.ಎನ್. ಐ‌. ಸುದ್ದಿ ಸಂಸ್ಥೆಯಲ್ಲಿ ವರದಿಗಾರರಾಗಿ, ನಂತರ ಡೆಕ್ಕನ್ ಹೆರಾಲ್ಡ್ ನಲ್ಲಿಯೂ ಸಲ್ಲಿಸಿದರು,ಈಗ ಬೆಳಗಾವಿಯ ಲೋಕ ದರ್ಶನ ದಿನಪತ್ರಿಕೆಯಲ್ಲಿಯೂ ಸೇವೆ ಸಲ್ಲಿಸುತಿದ್ದರು.
ಅವರು ಪತ್ನಿ, ಇಬ್ಬರು ಮಕ್ಕಳು, ಅಪಾರ ಬಂಧುಬಳಗವನ್ನು ಅಗಲಿ ಹೋಗಿದ್ದಾರೆ. ಅವರ ಅಂತ್ಯಕ್ರಿಯೆ ಬೆಳಗಾವಿಯ ಸದಾಶಿವನಗರ ರುದ್ರ ಭೂಮಿಯಲ್ಲಿ ಇಂದು ಸಂಜೆ ನಾಲ್ಕು ಗಂಟೆಗೆ ಜರುಗಲಿದೆ.
ಬೆಳಗಾವಿಯ ಪತ್ರಕರ್ತರು ಎಂ. ಎನ್. ಪಾಟೀಲ ಅವರ ನಿಧನಕ್ಕಾಗಿ ಶೋಕ ವ್ಯಕ್ತಪಡಿಸಿ ಅ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.