LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಮನೆಯಲ್ಲೇ ಕುಳಿತು ತೆರಿಗೆ ಪಾವತಿಸಲು ಅವಕಾಶ: ಡಾ. ಸಿದ್ದು ಹುಲ್ಲೋಳಿ

ಬೆಳಗಾವಿ, ನ. 18: ಮಹಾನಗರ ಪಾಲಿಕೆಯ ವ್ಯಾಪ್ತಿಯ ಆಸ್ತಿಗಳ ತೆರಿಗೆ ಪಾವತಿ ಪ್ರಕ್ರಿಯೆಯನ್ನು ಸರಳ ಹಾಗೂ ಜನಸ್ನೇಹಿಗೊಳಿಸಲು ಮೂರು ಹೊಸ ಸೇವೆಗಳನ್ನು ಆರಂಭಿಸಲಾಗಿದೆ ಎಂದು ಪಾಲಿಕೆಯ ಕಂದಾಯ ಶಾಖೆ ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿ ತಿಳಿಸಿದರು.

ಪಾಲಿಕೆಯಲ್ಲಿ ನಡೆದ ಕಂದಾಯ ಶಾಖೆ ಸಿಬ್ಬಂದಿ ಸಭೆಯಲ್ಲಿ ಮಾತನಾಡಿದ ಅವರು, ತೆರಿಗೆದಾರರ ಅನುಕೂಲಕ್ಕಾಗಿ ವಿಶೇಷ ತಂತ್ರಾಂಶ ಅಳವಡಿಸಲಾಗಿದ್ದು, ಸಾಮೂಹಿಕ ಕಿರುಸಂದೇಶ, ವಾಟ್ಸಾಪ್ ಸಂವಾದ ಸೇವೆ ಹಾಗೂ ಭಾರತ ಬಿಲ್ ಪಾವತಿ ವ್ಯವಸ್ಥೆ ಮೂಲಕ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,71,000 ಆಸ್ತಿಗಳಿದ್ದು, ಈ ಪೈಕಿ 90,000 ಆಸ್ತಿಗಳ ತೆರಿಗೆ ಪಾವತಿಯಾಗಿದೆ. ಇನ್ನೂ ಸುಮಾರು 80,000 ಆಸ್ತಿಗಳ ತೆರಿಗೆ ವಸೂಲಿಯಾಗಬೇಕಿದೆ ಎಂದು ತಿಳಿಸಿದರು.

ಮೂರು ಸೇವೆಗಳ ವಿವರ: ಸಾಮೂಹಿಕ ಕಿರುಸಂದೇಶ ವ್ಯವಸ್ಥೆಯ ಮೂಲಕ ತೆರಿಗೆದಾರರಿಗೆ ಬಾಕಿ ತೆರಿಗೆಯ ಮಾಹಿತಿ ಕಳುಹಿಸಲಾಗುತ್ತದೆ. ಇದರಿಂದ ನಾಗರಿಕರು ತಮ್ಮ ಆಸ್ತಿಯ ತೆರಿಗೆ ಬಾಕಿ ತಿಳಿದು ಪಾವತಿಸಬಹುದು.

ವಾಟ್ಸಾಪ್ ಸಂವಾದ ಸೇವೆಯ 7090022888 ಸಂಖ್ಯೆಯ ಮೂಲಕ ಈಗಾಗಲೇ ಪಾವತಿಸಿದ ತೆರಿಗೆ, ಬಾಕಿ ಮೊತ್ತ ಹಾಗೂ ಪ್ರಸಕ್ತ ವರ್ಷದ ತೆರಿಗೆಯ ವಿವರ ಪಡೆಯಬಹುದು. ಹಿಂದಿನ ಬಾಕಿ ತೆರಿಗೆ ಪಾವತಿಸಿದ ಬಳಿಕವೇ ಪ್ರಸಕ್ತ ವರ್ಷದ ತೆರಿಗೆ ಪಾವತಿಸಲು ವ್ಯವಸ್ಥೆಯಲ್ಲಿ ಅವಕಾಶವಿರುತ್ತದೆ.

ಭಾರತ ಬಿಲ್ ಪಾವತಿ ವ್ಯವಸ್ಥೆಯ ಮೂಲಕ ಪೇಟಿಎಂ, ಗೂಗಲ್ ಪೇ ಹಾಗೂ ಫೋನ್ ಪೇ ಬಳಸಿ ಆಸ್ತಿ ತೆರಿಗೆ ಪಾವತಿಸಬಹುದು. ಈ ಸೇವೆಗಳಿಂದ ತೆರಿಗೆದಾರರು ಉತ್ತರ, ದಕ್ಷಿಣ, ಮಧ್ಯ, ಬೆಳಗಾವಿ-1 ವಲಯ ಕಚೇರಿಗಳು ಅಥವಾ ಗಣಕಯಂತ್ರ ಕೇಂದ್ರಗಳಿಗೆ ತೆರಳುವ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ವಸತಿ, ವಾಣಿಜ್ಯ ಹಾಗೂ ಕೈಗಾರಿಕಾ ಆಸ್ತಿಗಳ ತೆರಿಗೆ ಪಾವತಿಸಬಹುದು. ತೆರಿಗೆಗೆ ಸಂಬಂಧಿಸಿದ ಮಾಹಿತಿಯನ್ನೂ ಪಡೆಯಬಹುದು.

ಇದರಿಂದ ನಾಗರಿಕರ ಸಮಯ ಉಳಿತಾಯವಾಗುವುದರ ಜತೆಗೆ ನಿಗದಿತ ಅವಧಿಯಲ್ಲಿ ತೆರಿಗೆ ಪಾವತಿಸಲು ಅನುಕೂಲವಾಗಲಿದೆ. ಸಾರ್ವಜನಿಕರು ಈ ಮೂರು ಸೇವೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಾ. ಹುಲ್ಲೋಳಿ ಮನವಿ ಮಾಡಿದರು.

ಸಭೆಯಲ್ಲಿ ಪಾಲಿಕೆಯ ವಿವಿಧ ವಲಯ ಆಯುಕ್ತರು, ಕಂದಾಯ ಶಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST