LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
International News

ಭಾರತೀಯ ನಾವಿಕರಿದ್ದ ಹಡಗು ಮೇಲೆ ಅಮೆರಿಕದ ದಾಳಿ : ಮೂವರು ಭಾರತೀಯ ನಾವಿಕರ ಸಾವು

ಹೊಸದಿಲ್ಲಿ, ಜೂ. 11 : ಒಮಾನ್‌ ಕೊಲ್ಲಿಯಲ್ಲಿ ವಾಣಿಜ್ಯ ಹಡಗಿನ ಮೇಲೆ ಅಮೆರಿಕದ ಸೇನೆ ನಡೆಸಿದ ದಾಳಿಯಲ್ಲಿ ನಾಪತ್ತೆಯಾಗಿದ್ದ ಮೂವರು ಭಾರತೀಯ ನಾವಿಕರು ಮೃತಪಟ್ಟಿರುವುದು ದೃಢಪಟ್ಟಿದೆ. ಈ ಘಟನೆಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಮೆರಿಕದ ವಿರುದ್ಧ ಅಧಿಕೃತ ರಾಜತಾಂತ್ರಿಕ ಪ್ರತಿಭಟನೆ ದಾಖಲಿಸಿದೆ.

ಇರಾನ್‌ ಬಂದರಿನಿಂದ ತೈಲ ಸಾಗಿಸುತ್ತಿದ್ದ ಪಲಾವು ದೇಶದ ಧ್ವಜ ಹೊಂದಿದ್ದ ಸೆಟ್ಬೆಲ್ಲೊ ವಾಣಿಜ್ಯ ಹಡಗಿನ ಮೇಲೆ ಅಮೆರಿಕದ ಸೇನೆ ದಾಳಿ ನಡೆಸಿತ್ತು. ಇರಾನ್‌ ಮೇಲಿನ ಅಮೆರಿಕದ ನಿರ್ಬಂಧಗಳನ್ನು ಉಲ್ಲಂಘಿಸಿ ತೈಲ ಸಾಗಣೆ ನಡೆಸಲಾಗುತ್ತಿತ್ತು ಹಾಗೂ ಅಮೆರಿಕದ ಸೂಚನೆಗಳನ್ನು ಪಾಲಿಸಲು ಹಡಗು ವಿಫಲವಾಗಿತ್ತು ಎಂಬ ಕಾರಣವನ್ನು ಅಮೆರಿಕ ಸಮರ್ಥನೆಯಾಗಿ ಮುಂದಿಟ್ಟಿತ್ತು.

ದಾಳಿಯ ಬಳಿಕ ಹಡಗಿನಲ್ಲಿದ್ದ 24 ಭಾರತೀಯ ಸಿಬ್ಬಂದಿಗಳ ಪೈಕಿ 21 ಮಂದಿಯನ್ನು ರಕ್ಷಿಸಲಾಗಿತ್ತು. ಆದರೆ ಮೂವರು ನಾವಿಕರು ನಾಪತ್ತೆಯಾಗಿದ್ದರು. ಅವರಿಗಾಗಿ ಹಲವು ದಿನಗಳಿಂದ ಶೋಧ ಕಾರ್ಯ ಮುಂದುವರಿದಿದ್ದರೂ, ಇದೀಗ ಆ ಮೂವರು ಮೃತಪಟ್ಟಿರುವುದು ಖಚಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬೆಳವಣಿಗೆ ಭಾರತದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದ್ದು, ಮೃತ ನಾವಿಕರ ಕುಟುಂಬಗಳಿಗೆ ಸಂತಾಪ ಸೂಚಿಸಲಾಗಿದೆ. ಜೊತೆಗೆ ಘಟನೆಯ ಸಂಪೂರ್ಣ ವಿವರಗಳನ್ನು ಪಡೆಯಲು ಭಾರತ ಸರ್ಕಾರ ರಾಜತಾಂತ್ರಿಕ ಮಟ್ಟದಲ್ಲಿ ಮುಂದಿನ ಕ್ರಮಗಳನ್ನು ಕೈಗೊಂಡಿದೆ.

ಇದೇ ವೇಳೆ, ಒಮಾನ್‌ ಕರಾವಳಿಯಲ್ಲಿ ನಡೆದ ದಾಳಿಯನ್ನು ಭಾರತ ಖಂಡಿಸಿದೆ. ವಿದೇಶಾಂಗ ಸಚಿವಾಲಯವು ಭಾರತದಲ್ಲಿನ ಅಮೆರಿಕದ ರಾಜತಾಂತ್ರಿಕ ಅಧಿಕಾರಿ ಜಾಸನ್‌ ಮೀಕ್ಸ್‌ ಅವರನ್ನು ಕರೆಸಿ ಬಲವಾದ ಪ್ರತಿಭಟನೆ ವ್ಯಕ್ತಪಡಿಸಿದೆ. ಈ ಸಂಬಂಧ ಅಧಿಕೃತ ರಾಜತಾಂತ್ರಿಕ ಟಿಪ್ಪಣಿಯನ್ನೂ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳು ಹಾಗೂ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಭಾರತ ಒತ್ತಾಯಿಸಿದೆ. ಅಂತರರಾಷ್ಟ್ರೀಯ ಜಲಮಾರ್ಗಗಳಲ್ಲಿ ಮುಕ್ತ, ಸುರಕ್ಷಿತ ಹಾಗೂ ಅಡೆತಡೆಯಿಲ್ಲದ ಸಂಚಾರವನ್ನು ಶೀಘ್ರ ಪುನಃಸ್ಥಾಪಿಸುವುದು ಅಗತ್ಯ ಎಂದು ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅನುಭವಿಗಳಿಂದ ಹೊಸ ಮುಖಗಳವರೆಗೆ: ಸಚಿವ ಸಂಪುಟ ಸೇರಿದ 19 ಶಾಸಕರ ರಾಜಕೀಯ ಪಯಣಮಳೆ ಅಬ್ಬರಕ್ಕೆ ರಾಜ್ಯ ತತ್ತರ : ಜಲಾಶಯಗಳು ಭರ್ತಿ, ನದಿ-ಹಳ್ಳಗಳು ಅಪಾಯದ ಮಟ್ಟಕ್ಕೆಸಂಪುಟ ವಿಸ್ತರಣೆಯಲ್ಲೇ ಕೊನೆ ಕ್ಷಣದ ಬದಲಾವಣೆ: 19 ಮಂದಿಗೆ ಮಾತ್ರ ಸ್ಥಾನಕಾಂಗ್ರೆಸ್ ಮೇಲಿನ ನಂಬಿಕೆ ಕುಸಿದಿದೆ : ತನ್ವೀರ ಸೇಠ್ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್‌ಗೆ ಮೊದಲ ರಾಜಕೀಯ ಗೆಲುವುಗೋವಾದಲ್ಲಿ ಹೊಸ ಕಟ್ಟುನಿಟ್ಟಿನ ನಿಯಮ: ಈ ತಪ್ಪು ಮಾಡಿದರೆ ₹1 ಲಕ್ಷದವರೆಗೆ ದಂಡಗರ್ಭಪಾತ ಜಾಲದ ಬೆಚ್ಚಿಬೀಳಿಸುವ ಸತ್ಯ: ‘ಗಂಡು ಮಗು’ ಔಷಧಿ ಹೆಸರಿನಲ್ಲಿ ವಂಚನೆ"ನಾನೂ ಸಚಿವ ಸ್ಥಾನದಿಂದ ವಂಚಿತನಾಗಿದ್ದೆ": ಅಸಮಾಧಾನಿತ ಶಾಸಕರಿಗೆ ಡಿ.ಕೆ.ಶಿವಕುಮಾರ ಸಮಾಧಾನಡಿ.ಕೆ. ಸಂಪುಟ ವಿಸ್ತರಣೆ : 19 ಸಚಿವರ ಪ್ರಮಾಣ ವಚನ, ಮಹಿಳೆಯರಿಗೆ ಸಿಗಲಿಲ್ಲ ಅವಕಾಶ ರಾಮಮಂದಿರ ದೇಣಿಗೆ ಕಳ್ಳತನ, ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ : ಸಂಸತ್ ಆವರಣದಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆ