ಬೆಳಗಾವಿ: ಇಲ್ಲಿನ ಸರ್ಕಾರಿ ಸರದಾರ್ಸ್ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆನರಾ ರೊಬ್ಯಾಕೋ ಎಎಂಸಿ ಮತ್ತು ಕೇನ್ಯಾ ಅಸೋಸಿಯೇಟ್ಸ್ ಸಂಸ್ಥೆ ವತಿಯಿಂದ ಬೆಳಗಾವಿ ನಗರ ಮತ್ತು ಗ್ರಾಮೀಣ ವಲಯಗಳ 45 ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್ ವಿತರಿಸಲಾಯಿತು.
ಡಿಡಿಪಿಐ ಲೀಲಾವತಿ ಹಿರೇಮಠ, ‘ಖಾನಾಪುರ ತಾಲ್ಲೂಕಿನ ಕಾಡಂಚಿನ ಗ್ರಾಮದ ಶಾಲೆಗೆ ಭೇಟಿ ನೀಡಿದಾಗ, ವಿದ್ಯಾರ್ಥಿಗಳು ಕಾಲ್ನಡಿಗೆ ಮೂಲಕ ಬರುವುದನ್ನು ಗಮನಿಸಿದ್ದೆ. ಅವರಿಗೆ ಸ್ವತಃ ಎರಡು ಸೈಕಲ್ ಕೊಡಿಸಿದ್ದೆ. ಇದರಿಂದ ಪ್ರೇರಣೆಗೊಂಡ ಹಲವು ದಾನಿಗಳು ಖಾನಾಪುರ ತಾಲ್ಲೂಕಿನಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ಕೊಡಿಸಿದ್ದರು. ಈಗ ಈ ಸಂಸ್ಥೆಯವರು 45 ವಿದ್ಯಾರ್ಥಿಗಳಿಗೆ ಸೈಕಲ್ ಕೊಡಿಸಿರುವುದು ಶ್ಲಾಘನೀಯ’ ಎಂದರು.
ಸಂಸ್ಥೆಯ ವಿಭಾಗೀಯ ಮುಖ್ಯಸ್ಥ ಸದಾನಂದ ಪ್ಯಾಟಿ ಮಾತನಾಡಿದರು.
ಆನಂದ ಕುಲಕರ್ಣಿ, ರಾಮಚಂದ್ರ ದೇಶಪಾಂಡೆ, ಡಿ.ಆರ್.ಮಾಳಿ, ಮಧುಸೂಧನ ಗಲಗಲಿ, ಎಸ್.ವೈ.ಕುಂದರಗಿ, ಸಿ.ಬಿ.ಹಿರೇಮಠ ಉಪಸ್ಥಿತರಿದ್ದರು. ಬಿಇಒ ರವಿ ಭಜಂತ್ರಿ ಸ್ವಾಗತಿಸಿದರು. ರವಿ ಹಲಕರ್ಣಿ ನಿರೂಪಿಸಿದರು. ಉಪ ಪ್ರಾಚಾರ್ಯ ಶಿವಶಂಕರ ಹಾದಿಮನಿ ವಂದಿಸಿದರು.

