Please assign a menu to the primary menu location under menu

State

ಅಖಂಡ ಕರ್ನಾಟಕ ಮುಖ್ಯಮಂತ್ರಿ ಆಗುವ ಯೋಗ್ಯತೆ ಇದೆ : ಉಮೇಶ್ ಕತ್ತಿ 

umesh katti

ಗದಗ: ನನಗೂ ಅಖಂಡ ಕರ್ನಾಟಕಕ್ಕೆ ಮುಖ್ಯಮಂತ್ರಿ ಆಗುವ ಯೋಗ್ಯತೆ ಇದೆ ಅಂತ ಅರಣ್ಯ ಖಾತೆ ಹಾಗೂ ಆಹಾರ ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಹೇಳಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಅವರು ಮಾತನಾಡಿದ ಅವರು , 9 ಬಾರಿ ಶಾಸಕನಾಗಿ ನಾನು ಆಯ್ಕೆ ಆಗಿದ್ದು, ರಾಜ್ಯದ ಹಿರಿಯ ರಾಜಕಾರಣಿಯಾಗಿದ್ದೇನೆ ಹೀಗಾಗಿ ಕರ್ನಾಟಕದ ಮುಖ್ಯಮಂತ್ರಿ ಆಗಬೇಕು. ಇನ್ನೂ 15 ವರ್ಷ ನನ್ನ ರಾಜಕೀಯ ಜೀವನ ಇದೆ ಅಂತ ಹೇಳಿದರು.

ಇನ್ನೂ ಇದೇ ವೇಳೆ ಅವರು ರಾಜ್ಯ ಸರ್ಕಾರದ 40% ಕಮೀಷನ್ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಅವರು ಉತ್ತರಿಸುತ್ತ, ಕೆಂಪಯ್ಯ ಯಾರು ಎಂಬುದು ಗೊತ್ತಿಲ್ಲ ಅಂತ ಹೇಳಿದರು.


Samadarshi News

Leave a Reply