ಚಿಕ್ಕಮಗಳೂರು: ಇನ್ನು 6 ವರ್ಷದಲ್ಲಿ ಕಲಿಯುಗ ಅಂತ್ಯವಾಗಲಿದೆ ಎಂದು ಚಿಕ್ಕಮಗಳೂರಿನಲ್ಲಿ ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಜನಜಾಗೃತಿ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಮನುಷ್ಯ ಸಾಯುತ್ತಾನೆ ಎಂದರ್ಥವಲ್ಲ. ಸತ್ಯಯುಗ ಮತ್ತೆ ಆರಂಭಗೊಳ್ಳಲಿದೆ ಎಂದಿದ್ದಾರೆ. ದೇಶಕ್ಕೆ ಇಬ್ಬರು ಪ್ರಧಾನಿ, ರಾಷ್ಟ್ರಪತಿಗಳು ಇರಲಿದ್ದಾರೆ ಎಂದರು.
ಇನ್ನು ಸಂಧಿಕಾಲ ಅನ್ನುವುದು 25 ವರ್ಷ ಇರುತ್ತದೆ. ಸತ್ಯಯುಗ ಶುರುವಾಗತ್ತದೆ. ಇವೆರಡು ಸೇರಿ 31 ವರ್ಷ ಆಗುತ್ತದೆ. ಹೀಗಾಗಿ ಇಂದಿನ ಜಗನ್ಮಾತೆ ತಾಯಿ ಮೇಲೆ ಆಣೆ ಮಾಡಿ ಹೇಳುತ್ತೇನೆ ಇನ್ನು 6 ವರ್ಷದಲ್ಲಿ ಕಲಿಯುಗ ಅಂತ್ಯವಾಗಲಿದೆ ಎಂದು ಹೇಳಿದ್ದಾರೆ.