ದೆಹಲಿ : ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವು ಪ್ರಕರಣ ಸಂಬಂಧಿಸಿದಂತೆ ಗೋವಾ ಪೊಲೀಸರು ಪಬ್ ಮಾಲೀಕ ಹಾಗು ಡ್ರಗ್ ಪೆಡ್ಲರನನ್ನು ಬಂಧಿಸಿದ್ದಾರೆ.
ಬಂಧಿತ ಕ್ಲಬ್ ಮಾಲೀಕನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಬಾಥ್ ರೂಮ್ನಲ್ಲಿ ಮಾದಕ ವಸ್ತು ಸಿಕ್ಕಿವೆ. ಸೋನಾಲಿ ತಮ್ಮ ಸಹಾಯಕರ ಸಹಾಯದಿಂದ ಡ್ರಗ್ ಪಡೆದುಕೊಂಡಿದ್ದಳು.
ಡ್ರಗ್ ಪಡೆದ ನಂತರ ಜೋಲಾಡುತ್ತ ಅವರು ಇಬ್ಬರ ಭುಜವನ್ನು ಹಿಡಿದುಕೊಂಡು ಕ್ಲಬ್ನಲ್ಲಿ ನಡೆದಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದರ ಆಧಾರದ ಮೇಲೆ ತನಿಖೆಯನ್ನು ಆರಂಭಿಸಿದ್ದೇವೆ ಎಂದು ಗೋವಾ ಪೊಲೀಸರು ಮಾಹಿತಿ ನೀಡಿದ್ದಾರೆ.