This is the title of the web page

ಜೋಡಿ ಕೊಲೆ ಪ್ರಕರಣ; ಮೂವರಿಗೆ ಗಲ್ಲು ಶಿಕ್ಷೆ

ಚಿಕ್ಕೋಡಿ, ೧೬-: ಅಕ್ರಮ ಸಂಬಂಧ ವಿಷಯದಲ್ಲಿ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ಚಿಕ್ಕೋಡಿ ನ್ಯಾಯಾಲಯದ ಗಲ್ಲು ಶಿಕ್ಷೆ ಪ್ರಕಟಿಸಿದೆ.

ಬಾಬು ಅಕಳೆ (24) ನಾಗಪ್ಪ ಅಕಳೆ (21) ಹಾಗೂ ಮುತ್ಯಪ್ಪ ಅಕಳೆ (20) ಮೂವರಿಗೆ ಗಲ್ಲು ಶಿಕ್ಷೆ ಘೋಷಣೆಯಾಗಿದೆ. ಕೊಲೆ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಒಂಭತ್ತು ವರ್ಷಗಳ ನಂತರ ತೀರ್ಪು ನೀಡಿದೆ.

ಬಸವರಾಜ ಹಾಗೂ ಸಂಗೀತಾ ನಡುವೆ ಅಕ್ರಮ ಸಂಬಂಧದ ಕಾರಣ ತಾಲೂಕಿನ ಕೆ ಕೆ ಮಮದಾಪೂರ ಗ್ರಾಮದಲ್ಲಿ ಆರೋಪಿಗಳು ಇಬ್ಬರನ್ನೂ ಬರ್ಬರ ಹತ್ಯೆ ಮಾಡಿದ್ದರು.

You might also like
Leave a comment