Please assign a menu to the primary menu location under menu

Crime News

ನಾಲ್ವರು ನಕಲಿ ಪತ್ರಕರ್ತರ ಬಂಧನ


ಬೆಳಗಾವಿ: ಪತ್ರಕರ್ತರೆಂದು ಹೇಳಿಕೊಂಡು ಗೂಡ್ಸ ಗಾಡಿ ಅಡ್ಡಗಟ್ಟಿ ವ್ಯಕ್ತಿ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಮಕನಮರಡಿ ಪೊಲೀಸರು ನಾಲ್ವರು ನಕಲಿ ಪತ್ರಕರ್ತರನ್ನು ಬಂಧಿಸಿದ್ದಾರೆ.

ಗುರುರಾಜ ಹುಕ್ಕೇರಿ ಎಂಬುವವರು ತಮ್ಮ ಗೂಡ್ಸ ವಾಹನದಲ್ಲಿ ಜೋಳದ ಪಿಡ್ಸ್ ಲೋಡ್ ಮಾಡಿಕೊಂಡು ಕೊನ್ನೂರಿನಿಂದ ಹೆಬ್ಬಾಳಕ್ಕೆ ಹೊರಟಾಗ ಟಾಟಾ ಇಂಡಿಗೋ ಕಾರ್ ಗಾಡಿ ಬಂದ ನಾಲ್ವರು ದುಷ್ಕರ್ಮಿಗಳು ಗೂಡ್ಸ ಗಾಡಿ ಅಡ್ಡಗಟ್ಟಿ ಬೆದರಿಕೆಯೊಡ್ದಿದ್ದಾರೆ.

ನಾವು ಪತ್ರಕರ್ತರು ಎಂದು ಹೇಳಿಕೊಂಡು ನಿಮ್ಮ ಗಾಡಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದೀರಿ ಅಂದು ಫುಡ್ ಇನ್ಸ್ಪೆಕ್ಟರ್ ಮತ್ತು ಪೊಲೀಸರಿಗೆ ದೂರು ಕೊಟ್ಟು ಗಾಡಿ ಶೀಜ್ ಮಾಡಿಸುತ್ತೇವೆ ಎಂದು ಹೆದರಿಸಿ ಅವಾಚ್ಯ ಶಬ್ದಗಳಿಂದ ಬೈದು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುರಾಜ ಶಿವಾನಂದ ಯಮಕನಮರಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಯಮಕನಮರಡಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು,  ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.


Samadarshi News

Leave a Reply