ಬೆಳಗಾವಿ : ಕಳೆದ ಸೋಮವಾರ ತನ್ನ ಬೇಟೆಯಿಂದ ತಪ್ಪಿಸಿಕೊಂಡು ಪುನಃ ತನ್ನ ಗಾಲ್ಫ ಕೋರ್ಸ ಸೇರಿಕೊಂಡಿರುವ ಚಿರತೆ ನಿನ್ನೆ ರಾತ್ರಿ ಅಳವಡಿಸಿರುವ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಳವಡಿಸಲಾಗಿರುವ ಕ್ಯಾಮೆರಾಗಳಲ್ಲಿ ಹತ್ತನೇ ನಂಬರ್ ನ ಕ್ಯಾಮೆರಾದಲ್ಲಿ ನಿನ್ನೆ ರಾತ್ರಿ 10 ಗಂಟೆ 22 ನಿಮಿಷಕ್ಕೆ ಸೆರೆಯಾಗಿದೆ.
ಹಾಗಾಗಿ ಚಿರತೆ ಸೆರೆಗೆ ಯೋಜನೆ ಚುರುಕುಗೊಂಡಿದ್ದು ಅದರ ಪತ್ತೆಗೆ ನೆರವಾಗುವಂತೆ ಗಾಲ್ಫ ಕೋರ್ಸ ಮೈದಾನದ ಗೋಡೆಯಂಚಿನಲ್ಲಿ ಬೆಳೆದಿದ್ದ ಗಿಡಗಂಟೆ, ಕುರುಚಲು ಬೆಳೆಗಳನ್ನು ಐದು ಜೆಸಿಬಿಗಳನ್ನು ಬಳಸಿ ಕಿತ್ತು ರಸ್ತೆಯನ್ನು ನಡೆದಾಡುವ ಸ್ಥಿತಿಗೆ ತರಲಾಗಿದೆ. ಅಲ್ಲದೇ ಸುಮಾರು ಆರು ಬೇಟೆ ನಾಯಿಗಳನ್ನು ಎರಡು ಆನೆಗಳೊಂದಿಗೆ ಬಿಡಲಾಗಿದೆ.
ಡಿಎಫ್ಒ ಅಂಥೋನಿ ಮರಿಯಪ್ಪ ಮತ್ತು ಎಸಿಎಫ್ ಮಲ್ಲಿನಾಥ ಕುಸನಾಳ ಗಾಲ್ಫ ಕೋರ್ಸನಲ್ಲಿದ್ದು ಉಸ್ತುವಾರಿ ವಹಿಸಿದ್ದಾರೆ.