Please assign a menu to the primary menu location under menu

Entertainment

ಖ್ಯಾತ ಹಾಸ್ಯ ಕಲಾವಿದ ರಾಜು ಶ್ರೀವಾಸ್ತವ ವಿಧಿವಶ


ಹೊಸದಿಲ್ಲಿ: ಖ್ಯಾತ ಹಾಸ್ಯ ಕಲಾವಿದ ರಾಜು ಶ್ರೀವಾಸ್ತವ ಅವರು ತಮ್ಮ 58 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಹಾಸ್ಯನಟ ಕೊನೆಯುಸಿರೆಳೆದರು.

ಆಗಸ್ಟ 10 ರಂದು ಹೃದಯಾಘಾತಕ್ಕೊಳಗಾಗಿದ್ದ ನಂತರ ರಾಜು ಅವರನ್ನು ಏಮ್ಸ್ ಗೆ ದಾಖಲಿಸಲಾಗಿತ್ತು.ಅದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

ರಾಜು ಶ್ರೀವಾತ್ಸವ ಅವರು ಸ್ಟ್ಯಾಂಡ್-ಅಪ್ ಹಾಸ್ಯ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. 2005 ರಲ್ಲಿ ಮೊದಲ ಸೀಸನ್ ಪ್ರಥಮ ಪ್ರದರ್ಶನದೊಂದಿಗೆ ಅವರು ಮೊದಲ ಬಾರಿಗೆ ಸ್ಟ್ಯಾಂಡ್-ಅಪ್ ಕಾಮಿಡಿ ಟ್ಯಾಲೆಂಟ್ ಹಂಟ್ ಶೋ ‘ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್’ ಮೂಲಕ ಖ್ಯಾತಿ ಗಳಿಸಿದರು. ಕೆಲ ಹಿಂದಿ ಚಲನಚಿತ್ರಗಳಲ್ಲಿ ಕೂಡ ಅವರು ಕಾಣಿಸಿಕೊಂಡರು. ಅವರು ಉತ್ತರ ಪ್ರದೇಶ ಚಲನಚಿತ್ರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದರು.


Samadarshi News

Leave a Reply