ಬೆಳಗಾವಿ, ೧೨- ಪೆಟ್ರೋಲ್ ಬಂಕ್ ನಲ್ಲಿನ ಕಾರ್ಮಿಕರ ಸಮಯೋಚಿತ ಜ್ಞಾನದಿಂದ ಒಂದು ದೊಡ್ಡ ಅಗ್ನಿ ಅವಘಡ ತಪ್ಪಿದೆ.
ಮಂಗಳವಾರ ಮಧ್ಯಾಹ್ನ ಕೊಲ್ಹಾಪುರ ಕ್ರಾಸ್ ಬಳಿಯಿರುವ ಹೊಸಮನಿ ಎಂಬವರ ಪೆಟ್ರೋಲ್ ಬಂಕ್ ಗೆ ಒಂದು ಬಿಳಿ ಬಣ್ಣದ ಸ್ಯಾಂಟ್ರೋ ಕಾರ್ ಇಂಧನ ತುಂಬಿಸಲು ಆಗಮಿಸಿತ್ತು. ಇನ್ನೇನು ಇಂಧನ ಹಾಕಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಕಾರಿನ ಮುಂದಿನ ಇಂಜಿನ್ ಭಾಗದಲ್ಲಿ ಮೊದಲು ಹೊಗೆ ಎದ್ದು ನಂತರ ತಕ್ಷಣ ಬೆಂಕಿ ಹೊತ್ತಿಕೊಂಡಿತು.
ಭಯಭೀತನಾದ ಚಾಲಕ ತಕ್ಷಣ ಕಾರಿನಿಂದ ಹೊರಗೆ ಬಂದಿದ್ದಾರೆ. ಆದರೆ ಇಂತಹ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕೆಂದು ತರಬೇತಿ ಪಡೆದ ಬಂಕ್ ಸಿಬ್ಬಂದಿ ಇಂಧನ ಹಾಕಿಸಿಕೊಳ್ಳಲು ಬಂದಿದ್ದ ಇತರರನ್ನು ತಕ್ಷಣ ದೂರ ಕಳುಹಿಸಿ ಬಂಕ್ ನಲ್ಲಿಡಲಾಗಿದ್ದ ಬೆಂಕಿ ಆರಿಸುವ ಸಾಮಗ್ರಿಗಳಿಂದ ಕಾರಿನ ಬೆಂಕಿ ಆರಿಸಿ, ಜನರ ಪ್ರಶಂಸೆಗೆ ಪಾತ್ರರಾದರು.