ಬೆಳಗಾವಿ, ಅ. 12 : ಸುಧಾರಿತ ಇಂಧನ ಸಂಗ್ರಹಣಾ ತಂತ್ರಜ್ಞಾನ ಮತ್ತು ವಿದ್ಯುತ್ ಬ್ಯಾಕಪ್ ಪರಿಹಾರಗಳನ್ನು ಒದಗಿಸುವ ಪ್ಯೂರ್‌ಪವರ್ (PuREPower) ಸಂಸ್ಥೆಯು ಬೆಳಗಾವಿಯಲ್ಲಿ ನೂತನ ಶೋರೂಮ್ ಆರಂಭಿಸುವ ಮೂಲಕ ಕರ್ನಾಟಕದಲ್ಲಿ ತನ್ನ ವಾಣಿಜ್ಯ ಚಟುವಟಿಕೆಗಳನ್ನು ವಿಸ್ತರಿಸಿದೆ. ನಗರದ ಗೋವಾವೇಸ್‌ನಲ್ಲಿ ಅಗ್ನಿಶಾಮಕ ದಳದ ಎದುರಿರುವ ಪ್ಯೂರ್ ಸ್ಟುಡಿಯೊದಲ್ಲಿ (PURE Studio) 1,000 ಚದರ ಅಡಿ ವಿಸ್ತೀರ್ಣದ ಅತ್ಯಾಧುನಿಕ ಶೋರೂಮ್ ಆರಂಭಿಸಲಾಗಿದ್ದು, ಗ್ರಿಡ್‌ಶಿಫ್ಟ್ (GridShift–DSPPKA0712) ಸಂಸ್ಥೆಯನ್ನು ಅಧಿಕೃತ ವಿತರಕರನ್ನಾಗಿ ನೇಮಿಸಲಾಗಿದೆ.
ಮನೆಗಳು, ಕಚೇರಿಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಕೈಗಾರಿಕೆಗಳಿಗೆ ಅಗತ್ಯವಿರುವ ವಿಶ್ವಾಸಾರ್ಹ ವಿದ್ಯುತ್ ಬ್ಯಾಕಪ್ ಮತ್ತು ಸುಧಾರಿತ ಇಂಧನ ಸಂಗ್ರಹಣಾ ವ್ಯವಸ್ಥೆಗಳನ್ನು ಗ್ರಾಹಕರಿಗೆ ಸುಲಭವಾಗಿ ಒದಗಿಸುವ ಉದ್ದೇಶದಿಂದ ಈ ಶೋರೂಮ್ ಆರಂಭಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಕರ್ನಾಟಕದ ಪ್ರಮುಖ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರಗಳಲ್ಲಿ ಒಂದಾಗಿರುವ ಬೆಳಗಾವಿಯಲ್ಲಿ ವಸತಿ ಪ್ರದೇಶಗಳು, ವ್ಯಾಪಾರ ವಹಿವಾಟು ಹಾಗೂ ಕೈಗಾರಿಕೆಗಳು ವೇಗವಾಗಿ ಬೆಳೆಯುತ್ತಿವೆ. ಇದರೊಂದಿಗೆ ನಿರಂತರ ವಿದ್ಯುತ್ ಪೂರೈಕೆ, ಸಮರ್ಥ ಇಂಧನ ನಿರ್ವಹಣೆ ಮತ್ತು ವಿಶ್ವಾಸಾರ್ಹ ಬ್ಯಾಕಪ್ ವ್ಯವಸ್ಥೆಗಳ ಅಗತ್ಯವೂ ಹೆಚ್ಚುತ್ತಿದೆ. ಈ ಬೇಡಿಕೆಯನ್ನು ಪೂರೈಸಲು ಪ್ಯೂರ್‌ಪವರ್ ತನ್ನ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಗೆ ಪರಿಚಯಿಸಿದೆ.
ನೂತನ ಶೋರೂಮ್‌ನಲ್ಲಿ ಗ್ರಾಹಕರು ವಿವಿಧ ಸಾಮರ್ಥ್ಯದ ಪ್ಯೂರ್‌ಪವರ್ ಇಂಧನ ಸಂಗ್ರಹಣಾ ವ್ಯವಸ್ಥೆಗಳನ್ನು ವೀಕ್ಷಿಸಬಹುದು. ತಮ್ಮ ಮನೆ, ಕಚೇರಿ, ವ್ಯಾಪಾರ ಮಳಿಗೆ ಅಥವಾ ಕೈಗಾರಿಕೆಯ ವಿದ್ಯುತ್ ಅಗತ್ಯಗಳಿಗೆ ಅನುಗುಣವಾಗಿ ಸೂಕ್ತ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳಲು ಅಗತ್ಯ ಮಾಹಿತಿ ಮತ್ತು ಮಾರ್ಗದರ್ಶನ ಪಡೆಯಬಹುದು.
ಡೀಸೆಲ್ ಜನರೇಟರ್‌ಗಳು ಹಾಗೂ ಸಾಂಪ್ರದಾಯಿಕ ಇನ್ವರ್ಟರ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕಂಪನಿಯ ಉತ್ಪನ್ನಗಳನ್ನು ವಿನ್ಯಾಸಗೊಳಿಸಲಾಗಿದೆ. ಕಡಿಮೆ ಶಬ್ದ, ಸ್ವಚ್ಛ ಇಂಧನ ಬಳಕೆ ಹಾಗೂ ಸ್ಮಾರ್ಟ್ ತಂತ್ರಜ್ಞಾನಕ್ಕೆ ಆದ್ಯತೆ ನೀಡಿರುವ ಈ ವ್ಯವಸ್ಥೆಗಳು ನಿರಂತರ ವಿದ್ಯುತ್ ಪೂರೈಕೆಯ ಜೊತೆಗೆ ಇಂಧನ ಸ್ವಾವಲಂಬನೆಗೂ ನೆರವಾಗಲಿವೆ ಎಂದು ಕಂಪನಿ ತಿಳಿಸಿದೆ.
ಹೊಸ ಶೋರೂಮ್ ಕೇವಲ ಉತ್ಪನ್ನಗಳ ಮಾರಾಟ ಕೇಂದ್ರವಾಗಿರದೆ, ಆಧುನಿಕ ಬ್ಯಾಟರಿ ತಂತ್ರಜ್ಞಾನ ಮತ್ತು ಇಂಧನ ಸಂಗ್ರಹಣಾ ವ್ಯವಸ್ಥೆಗಳ ಕುರಿತು ಗ್ರಾಹಕರಿಗೆ ಮಾಹಿತಿ ನೀಡುವ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ.
ಗ್ರಿಡ್‌ಶಿಫ್ಟ್ ಸಂಸ್ಥೆಯನ್ನು ಅಧಿಕೃತ ವಿತರಕರನ್ನಾಗಿ ನೇಮಿಸಿರುವುದರಿಂದ ಕರ್ನಾಟಕದಲ್ಲಿ ಪ್ಯೂರ್‌ಪವರ್‌ನ ವಿತರಣಾ ಜಾಲ ಮತ್ತಷ್ಟು ಬಲಗೊಂಡಿದೆ. ದೇಶದ ವಿವಿಧ ಭಾಗಗಳಲ್ಲಿ ಶೋರೂಮ್‌ಗಳು ಮತ್ತು ವಿತರಕರ ಜಾಲವನ್ನು ವಿಸ್ತರಿಸುವ ಮೂಲಕ ಸುಸ್ಥಿರ ಹಾಗೂ ವಿಶ್ವಾಸಾರ್ಹ ಇಂಧನ ಪರಿಹಾರಗಳನ್ನು ಹೆಚ್ಚಿನ ಗ್ರಾಹಕರಿಗೆ ತಲುಪಿಸುವ ಗುರಿಯನ್ನು ಕಂಪನಿ ಹೊಂದಿದೆ.
ಪ್ಯೂರ್ ಸಂಸ್ಥೆಯ ಕುರಿತು: ಐಐಟಿ ಹೈದರಾಬಾದ್‌ನ ಐಟಿಐಸಿಯಲ್ಲಿ (ITIC) ಇನ್‌ಕ್ಯುಬೇಟ್ ಆಗಿರುವ ಪ್ಯೂರ್ ಸಂಸ್ಥೆಯು ಬ್ಯಾಟರಿ ತಂತ್ರಜ್ಞಾನ, ಇಂಧನ ಸಂಗ್ರಹಣೆ ಹಾಗೂ ಎಲೆಕ್ಟ್ರಿಕ್ ಮೊಬಿಲಿಟಿ ಉತ್ಪನ್ನಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಸಂಸ್ಥೆಯು 100ಕ್ಕೂ ಹೆಚ್ಚು ಬೌದ್ಧಿಕ ಆಸ್ತಿ ಹಕ್ಕುಗಳನ್ನು (ಐಪಿ) ಹೊಂದಿದ್ದು, ದೇಶಾದ್ಯಂತ 80ಕ್ಕೂ ಹೆಚ್ಚು ಡೀಲರ್‌ಶಿಪ್‌ಗಳು ಮತ್ತು 80,000ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿರುವುದಾಗಿ ತಿಳಿಸಿದೆ.