LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಅಪರಾಧಿಗಳಿಗೆ ಜಾಮೀನು: ಭೀತಿಯಿಂದ ಗುಜರಾತ್ ತೊರೆದ ಬಿಲ್ಕಿಸ್ ಬಾನು

ಅಹಮದಾಬಾದ, ನ. 18: ಸಾಮೂಹಿಕ ಅತ್ಯಾಚಾರ ಹಾಗೂ ಕುಟುಂಬದ ಏಳು ಸದಸ್ಯರ ಬರ್ಬರ ಹತ್ಯೆ ಪ್ರಕರಣದ ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ ಜಾಮೀನು ಮಂಜೂರು ಮಾಡಿ ಜೀವಾವಧಿ ಶಿಕ್ಷೆ ಅಮಾನತುಗೊಳಿಸಿದ ಬೆನ್ನಲ್ಲೇ, ಭಯಭೀತರಾದ ಬಿಲ್ಕಿಸ್ ಬಾನು ತಮ್ಮ ಕುಟುಂಬದೊಂದಿಗೆ ಗುಜರಾತ್ ತೊರೆದಿದ್ದಾರೆ ಎಂದು ವರದಿಯಾಗಿದೆ.

ಅಕ್ಟೋಬರ್ 28ರಂದು ಸುಪ್ರೀಂ ಕೋರ್ಟ, ಅಪರಾಧಿಗಳಾದ ಬಿಪಿನ್ ಚಂದ್ರ ಜೋಶಿ ಮತ್ತು ಪ್ರದೀಪ ಮೊರ್ಧಿಯಾ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿತ್ತು. 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಅವರ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ ಏಳು ಮಂದಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಶಿಕ್ಷೆಗೊಳಗಾದ 11 ಮಂದಿಯಲ್ಲಿ ಇವರೂ ಸೇರಿದ್ದಾರೆ.

2008ರಲ್ಲಿ ಮುಂಬಯಿಯ ವಿಶೇಷ ಸಿಬಿಐ ಕೋರ್ಟ ಈ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 2022ರಲ್ಲಿ ಗುಜರಾತ್ ಸರಕಾರ ನೀಡಿದ್ದ ಸಾಮೂಹಿಕ ಶಿಕ್ಷೆ ಕಡಿತದ ಆದೇಶವನ್ನು ಸುಪ್ರೀಂ ಕೋರ್ಟ 2024ರ ಜನವರಿಯಲ್ಲಿ ರದ್ದುಗೊಳಿಸಿತ್ತು.

ಭೀತಿಯಿಂದ ರಾಜ್ಯ ತೊರೆದ ಕುಟುಂಬ: ಅಕ್ಟೋಬರ್ 28ರ ಆದೇಶದ ಬಳಿಕ ನವೆಂಬರ್ 2 ಅಥವಾ 3ರಂದು ಬಿಲ್ಕಿಸ್ ಬಾನು ಕುಟುಂಬ ಗುಜರಾತ್ ತೊರೆದಿದೆ ಎಂದು ಅವರ ಚಿಕ್ಕಪ್ಪ ರಝಾಕ್ ಮನ್ಸೂರಿ ತಿಳಿಸಿದ್ದಾರೆ.

ಅಪರಾಧಿಗಳ ಭಯದಿಂದ ಕುಟುಂಬ ಆಗಾಗ ವಾಸಸ್ಥಳ ಬದಲಾಯಿಸುತ್ತಿದ್ದರೂ ಗುಜರಾತ್‌ನಲ್ಲಿಯೇ ಉಳಿದಿತ್ತು. ಆದರೆ, ಈ ಬಾರಿ ರಾಜ್ಯವನ್ನೇ ತೊರೆಯಲು ನಿರ್ಧರಿಸಿದೆ. ಅಪರಾಧಿಗಳು ಪೆರೋಲ್ ಮೇಲೆ ಬಿಡುಗಡೆಯಾದಾಗ ಗ್ರಾಮಕ್ಕೆ ಬರುತ್ತಿರುವುದರಿಂದ ಕುಟುಂಬ ಆತಂಕದಲ್ಲಿದೆ ಎಂದು ಅವರು ಹೇಳಿದ್ದಾರೆ.

ಇಬ್ಬರು ಅಪರಾಧಿಗಳಿಗೆ ಜಾಮೀನು ನೀಡಿರುವ ವಿಚಾರವನ್ನು ನ್ಯಾಯಾಲಯ ಅಥವಾ ಸಂಬಂಧಪಟ್ಟವರು ಕುಟುಂಬಕ್ಕೆ ತಿಳಿಸಿರಲಿಲ್ಲ. ಸಾಮಾಜಿಕ ಮಾಧ್ಯಮ ಹಾಗೂ ಪತ್ರಿಕಾ ವರದಿಗಳ ಮೂಲಕ ವಿಷಯ ತಿಳಿದು ಆಘಾತಗೊಂಡಿದ್ದಾರೆ ಎಂದು ಮನ್ಸೂರಿ ತಿಳಿಸಿದ್ದಾರೆ.

ನ್ಯಾಯಕ್ಕಾಗಿ ಹೋರಾಟ ಮುಂದುವರಿಕೆ: ತಮ್ಮ ವಾದವನ್ನು ಆಲಿಸದೆಯೇ ಸುಪ್ರೀಂ ಕೋರ್ಟ ಆದೇಶ ಹೊರಡಿಸಿರುವುದಕ್ಕೆ ಬಿಲ್ಕಿಸ್ ಬಾನು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

‘ನನ್ನನ್ನು ಕರೆಯದೆ, ನನ್ನ ವಾದವನ್ನು ಆಲಿಸದೆ ಮತ್ತೊಮ್ಮೆ ಇಂತಹ ಆದೇಶ ಹೊರಡಿಸಿರುವುದನ್ನು ನಂಬಲಾಗುತ್ತಿಲ್ಲ. ನಾನು ಕಷ್ಟಪಟ್ಟು ಹೋರಾಡಿ ಪಡೆದ ನ್ಯಾಯವನ್ನೇ ಕಳೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

2002ರಲ್ಲಿ ಅತ್ಯಾಚಾರಕ್ಕೆ ಒಳಗಾದಾಗ ತಮಗೆ 19 ವರ್ಷವಾಗಿದ್ದು, ಗರ್ಭಿಣಿಯಾಗಿದ್ದೆ. ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ ಏಳು ಮಂದಿಯನ್ನು ಕಳೆದುಕೊಂಡ ನೋವಿನ ನಡುವೆಯೂ ಜನರ ಬೆಂಬಲದಿಂದ ನ್ಯಾಯಕ್ಕಾಗಿ ಹೋರಾಡಿದ್ದೆ ಎಂದು ಸ್ಮರಿಸಿದ್ದಾರೆ.

‘ನನಗೆ ಅನ್ಯಾಯ ಎಸಗಿದವರ ಶಿಕ್ಷೆಯನ್ನು ನನ್ನ ವಾದವನ್ನೂ ಆಲಿಸದೆ ಹೇಗೆ ಅಮಾನತುಗೊಳಿಸಲಾಯಿತು? ಯಾವುದೇ ಮಹಿಳೆ ತನ್ನ ಜೀವನದುದ್ದಕ್ಕೂ ನ್ಯಾಯಕ್ಕಾಗಿ ಹೋರಾಡುವ ಪರಿಸ್ಥಿತಿ ಎದುರಾಗಬಾರದು. ಈ ಆದೇಶದ ವಿರುದ್ಧ ಕಾನೂನು ಹೋರಾಟ ಮುಂದುವರಿಸುತ್ತೇನೆ’ ಎಂದು ಬಿಲ್ಕಿಸ್ ಬಾನು ಘೋಷಿಸಿದ್ದಾರೆ.

ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ ಮತ್ತು ಪಿ.ಬಿ. ವರಾಲೆ ಅವರ ಪೀಠವು ಇಬ್ಬರು ಅಪರಾಧಿಗಳು 17 ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದುದನ್ನು ಪರಿಗಣಿಸಿ ಜಾಮೀನು ಮಂಜೂರು ಮಾಡಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST