LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ದೇಶದ ಪ್ರಗತಿಯನ್ನು ಪ್ರಧಾನಿಯ ಭಾಷಣದಿಂದ ಅಳೆಯಲಾಗದು : ಖರ್ಗೆ

ಹೊಸದಿಲ್ಲಿ, ನ. 18: ದೇಶದ ಪ್ರಗತಿಯನ್ನು ಪ್ರಧಾನಿಯ ಭಾಷಣದ ಉದ್ದದಿಂದ ಅಳೆಯಲಾಗದು. ಜನಸಾಮಾನ್ಯರ ತಟ್ಟೆಯಲ್ಲಿರುವ ಆಹಾರ ಹಾಗೂ ಅವರ ಜೇಬಿನಲ್ಲಿರುವ ಹಣದಿಂದ ಅಳೆಯಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದು, ಬೆಲೆ ಏರಿಕೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

12 ವರ್ಷಗಳ ಹಿಂದೆ ಬೆಲೆ ಇಳಿಸುವ ಭರವಸೆ ನೀಡಿದ್ದ ಸರಕಾರದ ಆರ್ಥಿಕ ದುರಾಡಳಿತದಿಂದ ಇಂದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರ ಜೇಬು ಖಾಲಿಯಾಗಿದೆ. ನಿಮ್ಮ ಆರ್ಥಿಕ ದುರಾಡಳಿತಕ್ಕೆ ಜನರು ಇನ್ನೆಷ್ಟು ದಿನ ಬೆಲೆ ತೆರಬೇಕು ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನಿಸಿದ್ದಾರೆ.

2014ರಲ್ಲಿ ಹಣದುಬ್ಬರ ನಿಯಂತ್ರಿಸುವ ಭರವಸೆ ನೀಡಲಾಗಿತ್ತು. ಆದರೆ, 2026ರಲ್ಲಿ ಜನರ ಜೇಬಿಗೆ ಕನ್ನ ಹಾಕಲಾಗುತ್ತಿದೆ. ಗೋಧಿ ಹಿಟ್ಟಿನ ಬೆಲೆ ₹21ರಿಂದ ₹69ಕ್ಕೆ, ತೊಗರಿಬೇಳೆ ₹75ರಿಂದ ₹180ಕ್ಕೆ, ಸಾಸಿವೆ ಎಣ್ಣೆ ₹102ರಿಂದ ₹263ಕ್ಕೆ, ಹಾಲು ₹36ರಿಂದ ₹85ಕ್ಕೆ ಹಾಗೂ ಅಕ್ಕಿ ₹29ರಿಂದ ₹71ಕ್ಕೆ ಏರಿಕೆಯಾಗಿದೆ ಎಂದು ಖರ್ಗೆ ಆರೋಪಿಸಿದ್ದಾರೆ.

ಅಕ್ಟೋಬರ್‌ನಲ್ಲಿ ಆಹಾರ ಹಣದುಬ್ಬರ ಶೇ. 8.94ಕ್ಕೆ ಹಾಗೂ ಸಗಟು ಹಣದುಬ್ಬರ ಶೇ. 12.29ಕ್ಕೆ ತಲುಪಿದೆ. ಸಮೀಕ್ಷೆಯೊಂದರ ಪ್ರಕಾರ, ಶೇ. 61ರಷ್ಟು ಕುಟುಂಬಗಳ ಅಗತ್ಯ ವಸ್ತುಗಳ ಮಾಸಿಕ ವೆಚ್ಚ ಕಳೆದ ವರ್ಷಕ್ಕಿಂತ ಶೇ. 20ಕ್ಕೂ ಹೆಚ್ಚು ಹೆಚ್ಚಾಗಿದೆ. ಶೇ. 74ರಷ್ಟು ಜನರು ಅನಿವಾರ್ಯವಲ್ಲದ ಖರ್ಚುಗಳನ್ನು ಕಡಿತಗೊಳಿಸುವ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೈಗೊಳ್ಳುವ ಕ್ರಮಗಳ ಕುರಿತು ಪ್ರಧಾನಿ ಮೋದಿ ಶ್ವೇತಪತ್ರ ಹೊರಡಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST